Tuesday, 29 December 2020

2020 Year in Review | ‘ಓದಿನಂಗಳ’ದಲ್ಲಿ ಲೇಖಕಿ ಚೈತ್ರಾ ಅರ್ಜುನಪುರಿ

ವಿಚ್ಛೇದಿತ ಮಹಿಳೆಯನ್ನು ಸಮಾಜ ನೋಡುವ, ನಡೆಸಿಕೊಳ್ಳುವ ರೀತಿ, ಬಹುಪತ್ನಿತ್ವ ಹೊಂದಿರುವ ಪುರುಷರು, ಮಂಗಳಮುಖಿ ಎನ್ನುವ ಲಿಂಗಕ್ಕೆ ಅವಕಾಶವೇ ಕೊಡದ ಸಮಾಜ, ಶಿಯಾ ಮತ್ತು ಸುನ್ನಿಗಳ ನಡುವಿನ ಕಲಹಗಳು, ಹೀಗೆ ಹತ್ತು ಹಲವು ವಿಷಯಗಳನ್ನು ಹೊರ ಜಗತ್ತಿಗೆ ಕಾದಂಬರಿ ಪರಿಚಯ ಮಾಡಿಕೊಡುತ್ತದೆ.' ಸ್ಥೂಲ ನೋಟ ಕಟ್ಟಿಕೊಡುತ್ತಾರೆ ಲೇಖಕಿ ಚೈತ್ರಾ ಅರ್ಜುನಪುರಿ.

ನಮ್ಮ ಮಾತಿಗೆ, ಮೌನಕ್ಕೆ, ಆಲಿಸುವಿಕೆಗೆ, ನೋಟಕ್ಕೆ, ಸ್ಪರ್ಶಕ್ಕೆ ಮಿಗಿಲಾದುದರ ಹುಡುಕಾಟ ಮತ್ತು ತಣಿಕೆಗಾಗಿಯೇ ನಾವು ಮತ್ತೆ ಮತ್ತೆ ಅಕ್ಷರಲೋಕದ ಸಾಂಗತ್ಯಕ್ಕೆ ಬೀಳುವುದು. ಅದು ಉಸಿರಿನಷ್ಟೇ ಸಹಜ. ಭಾವಕ್ಕೂ ಬುದ್ಧಿಗೂ ಬೇಕಾದ ಆಮ್ಲಜನಕಕ್ಕಾಗಿ ನಾವು ಜಂಜಡಗಳ ಮಧ್ಯೆಯೇ ಹೆಚ್ಚೆಚ್ಚು ಆತುಕೊಳ್ಳುತ್ತಲು ನೋಡುತ್ತಿರುತ್ತೇವೆ. ವರ್ಷ ಆವರಿಸಿದ ಮಹಾಶೂನ್ಯದೊಂದಿಗೇ ನಾವು ಏನು ಓದಿದೆವು?


‘tv9 ಕನ್ನಡ ಡಿಜಿಟಲ್ ವರ್ಷಾಂತ್ಯ ವಿಶೇಷ 2020: ಓದಿನಂಗಳಸರಣಿಗಾಗಿ ಕನ್ನಡದ ಹಿರಿ-ಕಿರಿಯ ಕಥೆಗಾರರು, ಕಾದಂಬರಿಕಾರರು, ಕವಿಗಳು ಮತ್ತು ಗಂಭೀರ ಓದುಗರು ವರ್ಷ ತಾವು ಓದಿ ಮೆಚ್ಚಿದ ಎರಡು ಪುಸ್ತಕಗಳ ಬಗ್ಗೆ ಪುಟ್ಟ ಟಿಪ್ಪಣಿ ನೀಡಿದ್ದಾರೆ. ಪತ್ರಕರ್ತೆ, ಲೇಖಕಿ ಚೈತ್ರಾ ಅರ್ಜುನಪುರಿ ಆಯ್ಕೆಗಳು ಹೀಗಿವೆ.


ಕೃ: Girls of Riyadh (ಕಾದಂಬರಿ)

ಲೇ : ರಾಜಾ ಅಲ್ -ಸನೆ

ಪ್ರ: ಫಿಗ್ ಟ್ರೀ 

ಸೌದಿ ಅರೇಬಿಯಾದಸೆಕ್ಸ್ ಅಂಡ್ ದಿ ಸಿಟಿಆವೃತ್ತಿ ಎನಿಸುವ ರಾಜಾ ಅಲ್-ಸನೆಯ ಅವರಗರ್ಲ್ಸ್ ಆಫ್ ರಿಯಾದ್’ (2005) ಅರೇಬಿಕ್ ಭಾಷೆಯಲ್ಲಿ ಪ್ರಕಟವಾದಾಗ ಸೌದಿ ಅರೇಬಿಯಾದಲ್ಲಿ ಎಷ್ಟರ ಮಟ್ಟಿಗೆ ಕೋಲಾಹಲಕ್ಕೆ ಕಾರಣವಾಗಿತ್ತೆಂದರೆ ದೇಶದಲ್ಲಿ ಪುಸ್ತಕವನ್ನು ನಿಷೇಧಿಸಲಾಗಿತ್ತು. ಇಲ್ಲಿ ಗಮ್ರಾಹ್, ಸದೀಮ್, ಮಾಶೇಲ್ ಅಕಾ ಮಿಷೆಲ್ ಮತ್ತು ಲಮೀಸ್ ಎನ್ನುವ ನಾಲ್ಕು ಮೇಲ್ವರ್ಗದ ಗೆಳತಿಯರು ತಮ್ಮ ವೈಯಕ್ತಿಕ ಹೋರಾಟಗಳ ಮೂಲಕ ಹೊರ ಪ್ರಪಂಚದಿಂದ ಮರೆಮಾಚಲ್ಪಟ್ಟ ಅರಬ್ ಸಮಾಜದ ಬಗ್ಗೆ ಅಭೂತಪೂರ್ವ ಒಳನೋಟ ನೀಡುತ್ತಾರೆ.

ಸಂಪ್ರದಾಯವಾದಿ ಸಮಾಜದಲ್ಲಿ ಪುರಷರ ಪ್ರಾಬಲ್ಯದಡಿಯಲ್ಲಿ ವಾಸಿಸುವ ಮಹಿಳೆಯರಿಗೂ ಬದುಕು ಹೀಗೆಯೇ ಇರಬೇಕೆನ್ನುವ ನೂರಾರು ಆಸೆ-ಕನಸುಗಳಿವೆ, ಯೋಜನೆಗಳಿವೆ. ಇತರರ ಹಾಗೆ ಅವರೂ ಪ್ರೀತಿಯಲ್ಲಿ ಬೀಳುತ್ತಾರೆ, ಏಳುತ್ತಾರೆ. ನಿಟ್ಟಿನಲ್ಲಿ ವಿಶ್ವಾದ್ಯಂತ ಪ್ರಯಾಣಿಸುವ ಇವರು ಪಾಶ್ಚಾತ್ಯ ಸಮಾಜ ಮತ್ತು ತಮ್ಮ ದೇಶದ ನಡುವೆ ತಮ್ಮದೇ ಸ್ಥಾನ ಕಂಡುಕೊಳ್ಳುತ್ತಾರೆ.


ಇದೊಂದು ರೊಮ್ಯಾಂಟಿಕ್ ಕಾದಂಬರಿಯಾದರೂ, ಬೇರೆ ಕಾದಂಬರಿ ಕಥೆಗಳಲ್ಲಿ ಬರುವ ಗಂಡು-ಹೆಣ್ಣಿನ ಪ್ರಣಯ ಕಥೆ ಇಲ್ಲಿಲ್ಲ . ಎಷ್ಟೇ ಓದಿರಲಿ ಮದುವೆ ನಿರ್ಧಾರ ಮಾಡುವುದು ತಾಯಂದಿರೇ. ಅದರಲ್ಲಿ ಹುಡುಗನ ಅಥವಾ ಹುಡುಗಿಯ ಒಪ್ಪಿಗೆಯನ್ನಾಗಲಿ, ಅಭಿಪ್ರಾಯವನ್ನಾಗಲಿ ಕೇಳುವುದಿಲ್ಲ


ಮಹಿಳೆಯರ ಜೀವನ ಸುತ್ತುವುದೇ ಮದುವೆ, ಗಂಡನ ಸುತ್ತ, ಅದು ಬಿಟ್ಟರೆ ಬೇರೆ ಆಯ್ಕೆಗಳಿಲ್ಲ. ಪುರಷರೊಂದಿಗೆ ಮಾತುಕತೆಯಾಡಲೂ ಮಹಿಳೆಯರು ತಮ್ಮ ಕಂಪ್ಯೂಟರ್ ಮತ್ತು ಸ್ಮಾರ್ಟ್ ಫೋನ್ ಗಳ ಹಿಂದೆ ಅಡಗಿಕೊಳ್ಳಬೇಕು. ಪುರುಷರ ನಿರೀಕ್ಷೆಗಳ ಚಕ್ರವ್ಯೂಹವನ್ನು ಬೇಧಿಸುತ್ತಲೇ ಸಾಮಾಜಿಕ ಮತ್ತು ಕೌಟುಂಬಿಕ ನಿರೀಕ್ಷೆಗಳನ್ನೂ ಕಾಪಿಟ್ಟುಕೊಳ್ಳಬೇಕು.


ವಿಚ್ಛೇದಿತ ಮಹಿಳೆಯನ್ನು ಸಮಾಜ ನೋಡುವ, ನಡೆಸಿಕೊಳ್ಳುವ ರೀತಿ, ಬಹುಪತ್ನಿತ್ವ ಹೊಂದಿರುವ ಪುರುಷರು, ಮಂಗಳಮುಖಿ ಎನ್ನುವ ಲಿಂಗಕ್ಕೆ ಅವಕಾಶವೇ ಕೊಡದ ಸಮಾಜ, ಶಿಯಾ ಮತ್ತು ಸುನ್ನಿಗಳ ನಡುವಿನ ಕಲಹಗಳು, ಹೀಗೆ ಹತ್ತು ಹಲವು ವಿಷಯಗಳನ್ನು ಹೊರ ಜಗತ್ತಿಗೆ ಕಾದಂಬರಿ ಪರಿಚಯ ಮಾಡಿಕೊಡುತ್ತದೆ.


ಕೃ:  The Girl Who Fell to Earth  (ಆತ್ಮಚರಿತ್ರೆ)

ಲೇ: ಸೋಫಿಯಾ ಅಲ್ ಮರಿಯಾ

ಪ್ರ: ಹಾರ್ಪರ್ ಕೊಲಿನ್ಸ್

ಸೋಫಿಯಾ ಅಲ್-ಮರಿಯಾ ಬರೆದ ಆತ್ಮಚರಿತ್ರೆದಿ ಗರ್ಲ್ ಹೂ ಫೆಲ್ ಟು ಅರ್ಥ್: ಮೆಮೊಯಿರ್’ (2012)ನಲ್ಲಿ ಸಫಿಯಾ ಅಕಾ ಸೋಫಿಯಾ ಕತಾರಿನಲ್ಲಿರುವ ತನ್ನ ಬೆದೋಯಿನ್ ತಂದೆ ಮತ್ತು ಅಮೆರಿಕಾದಲ್ಲಿರುವ ಅಮೆರಿಕನ್ ತಾಯಿಯ ಕುಟುಂಬಗಳ ಬಗ್ಗೆ ಬೆಳಕು ಚೆಲ್ಲುತ್ತಾಳೆ


ಅಮೆರಿಕಾದಲ್ಲಿ ಸೋಫಿಯಾ ಆಗಿ, ಕತಾರಿನಲ್ಲಿ ಸಫಿಯಾ ಆಗಿ ಎರಡು ಖಂಡಗಳು, ಎರಡು ದೇಶಗಳು, ಎರಡು ಕುಟುಂಬಗಳು, ಎರಡು ಸಂಸ್ಕೃತಿಗಳು ಮತ್ತು ಎರಡು ಪ್ರಪಂಚಗಳ ನಡುವೆ ತನ್ನ ಅಲೆಮಾರಿ ಜೀವನಶೈಲಿಗೆ ಹೊಂದಿಕೊಳ್ಳಲು ಹೆಣಗಾಡುತ್ತಲೇ ಸೋಫಿಯಾ ಎಲ್ಲೋ ಕಳೆದು ಹೋಗುತ್ತಾಳೆ. ಕೊನೆಗೆ ಎರಡೂ ಪ್ರಪಂಚಗಳು ತನಗೆ ಸರಿ ಹೊಂದುವುದಿಲ್ಲವೆನ್ನುವ ಸತ್ಯವನ್ನು ಕಂಡುಕೊಂಡು, ತನ್ನ ಹೆಸರು ಸಫಿಯಾ ಮತ್ತು ಸೋಫಿಯಾ, ಅಥವಾ ಎರಡರಲ್ಲಿ ಯಾವುದೋ ಒಂದು ಎನ್ನುವುದನ್ನು ಒಪ್ಪಿಕೊಳ್ಳುತ್ತಾಳೆ.


ಹನ್ನೆರೆಡು ವರ್ಷದ ಅಮೇರಿಕನ್-ಬೆದೋಯಿನ್ ಹುಡುಗಿ ಒಳಗಿದ್ದೂ ಹೊರಗಿನವಳ ಹಾಗೆ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿ ವಿವರಿಸಿರುವುದರಿಂದ ಆತ್ಮಚರಿತ್ರೆ ಅನನ್ಯವೆನಿಸಿಕೊಳ್ಳುತ್ತದೆ. ಎರಡು ಸಂಪೂರ್ಣ ವಿಭಿನ್ನ ಸಂಸ್ಕೃತಿಗಳ ಅಡಕತ್ತರಿಯಲ್ಲಿ ಸಿಲುಕಿದಾಗ ನಲುಗುವ ಮಕ್ಕಳ ಮನಸ್ಥಿತಿ, ಪೂರ್ವ ಮತ್ತು ಪಶ್ಚಿಮದ ಬದುಕಿನ ನಡುವಿರುವ ಕಂದರ ಎಷ್ಟು ಆಳವೆನ್ನುವುದು ಅರಿವಾಗುತ್ತದೆ.


ಅರಬರ ಜೀವನಶೈಲಿಗೆ ಹೊಂದಿಕೊಳ್ಳಲು ಸೋಫಿಯಾಳ ತಾಯಿ ಗೇಲ್ ಕಷ್ಟ ಪಡುತ್ತಿರುವಾಗಲೇ, ಅವಳ ತಂದೆ ಮತರ್ ತನ್ನ ಎರಡನೇ ಹೆಂಡತಿ ಮತ್ತು ಮಗನೊಂದಿಗೆ ಮನೆಗೆ ಬರುವುದನ್ನು ಕಂಡಾಗ, ಅಮೇರಿಕನ್ ತಾಯಿಯನ್ನು ಧಿಕ್ಕರಿಸಿ ಬೆದೋಯಿನ್ ಅಜ್ಜಿಯ ಮನೆಗೆಬರುವ, ಅರಬ್ ಮಲತಾಯಿಯನ್ನು ಒಪ್ಪಿಕೊಳ್ಳುವ ಬಾಲಕಿ ಸೋಫಿಯಾಳ ಗೊಂದಲ ಅರ್ಥವಾಗುತ್ತದೆ. ಪತಿಯನ್ನು, ಅವನಿದ್ದ ದೇಶವನ್ನು ತೊರೆದರೂ, ಅಮೆರಿಕಾದಲ್ಲಿ ಅವನ ಧರ್ಮ, ಆಚಾರ-ವಿಚಾರಗಳನ್ನು ಕಟ್ಟುನಿಟ್ಟಾಗಿ ತನ್ನ ಹೆಣ್ಣು ಮಕ್ಕಳಿಗೂ ಕಲಿಸುವ ಗೇಲ್ ನಿಲುವು ಕಸಿವಿಸಿಯನ್ನುಂಟು ಮಾಡುತ್ತದೆ.


ಕತಾರ್ ಬೆದೋಯಿನ್ ಜನರ ಅಲೆಮಾರಿ ಜೀವನಶೈಲಿ, ಅವರ ವೈವಾಹಿಕ ಬದುಕು, ಬಹುಪತ್ನಿತ್ವ, ಹುಡುಗಿಯರ ವಿದ್ಯಾಭ್ಯಾಸ, ಮದುವೆ, ಪ್ರೀತಿ-ಪ್ರೇಮ, ಬಡತನ, ಅರಬರ ಸಂಸ್ಕೃತಿ, ಆಚಾರ-ವಿಚಾರಗಳ ಬಗ್ಗೆ, ಹೊಸದಾಗಿ ತೈಲ ಆವಿಷ್ಕಾರವಾದಾಗ ಅದೇ ತಾನೆ ಬೆಳೆಯಲು ಪ್ರಾರಂಭಿಸಿದ ಕತಾರ್ ರಾಜಧಾನಿ ದೋಹಾ, ಅದರ ಸುತ್ತ ಮುತ್ತಲಿನ ಪ್ರದೇಶಗಳ ಬಗ್ಗೆ ಆತ್ಮಚರಿತ್ರೆ ಸಾಕಷ್ಟು ಮಾಹಿತಿ ನೀಡುತ್ತದೆ.


(Source: TV9 Kannada)

No comments:

Post a Comment